bloodbankeng
                                                                                                                                                                                                                                 
ಅಧಿಕಾರಿಗಳು/ರಕ್ತ ನಿಧಿ ಲಾಗಿನ್:
ಲಾಗಿನ್
ರಕ್ತ ಅಂಕಿಅಂಶ(WHB):  ಇಲ್ಲಿ ಕ್ಲಿಕ್ ಮಾಡಿ...
Data Not Available
 

ರಕ್ತದಾನಿಗಳು ಗಮನಿಸಬೇಕಾದ ಅಂಶಗಳು


ರಕ್ತದಾನ ಮಾಡಿ-ಜೀವ ಉಳಿಸಿ- ರಕ್ತದಾನ ಸುರಕ್ಷಿತವಾಗಿದೆ -ಸುರಕ್ಷಿತ ರಕ್ತದಾನ ನಿಮ್ಮಿಂದ ಪ್ರಾರಂಭವಾಗಲಿ.
ಯಾವಾಗಲೂ ಪರವಾನಿಗೆ ಹೊಂದಿದ ರಕ್ತನಿಧಿಗಳಲ್ಲಿ ಅಥವಾ ಪರವಾನಿಗೆ ಪಡೆದ ರೀಜನಲ್ ಬ್ಲಡ್ ಟ್ರಾನ್ಸ್ ಪ್ಯೂಷನ್ ಸೆಂಟರ್, ಸರ್ಕಾರಿ ರಕ್ತನಿಧಿಗಳಲ್ಲಿ ಹಾಗೂ ಭಾರತೀಯ ರೆಡ್ ಕ್ರಾಸ್ ಸಂಸ್ಥೆಗಳು ನಡೆಸುವ ರಕ್ತದಾನ ಶಿಬಿರಗಳಲ್ಲಿ ಮಾತ್ರ ರಕ್ತದಾನ ಮಾಡಿ.
ಹಣಕ್ಕಾಗಿ ರಕ್ತದಾನ ಮಾಡುವುದು ಶಿಕ್ಷಾರ್ಹ ಅಪರಾಧ. 18 ರಿಂದ 60 ವರ್ಷದೊಳಗಿನ ಯಾರೇ ಆದರೂ ಲಿಂಗಭೇದವಿಲ್ಲದೇ ರಕ್ತದಾನ ಮಾಡಬಹುದು.
ರಕ್ತದಾನ ಮಾಡುವಾಗ ದೇಹದ ತೂಕ 45 ಕಿ.ಲೋ. ಗಿಂತ ಕಡಿಮೆ ಇರಬಾರದು ಮತ್ತು ದೇಹದಲ್ಲಿನ ಹಿಮೋಗ್ಲೋಬಿನ್ ಅಂಶ 12.5 ಗ್ರಾಂ/ಡಿ.ಎಲ್. ಗಿಂತ ಹೆಚ್ಚಿರಬೇಕು. ಗಂಡಸರು ಪ್ರತಿ 3 ತಿಂಗಳಿಗೊಮ್ಮೆ ಹಾಗೂ ಹೆಂಗಸರೂ ಪ್ರತಿ 4 ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದು.
ರಕ್ತದಾನಕ್ಕೂ ಮೊದಲು ವೈದ್ಯರು ಕೇಳುವ ಎಲ್ಲಾ ಪ್ರಶ್ನೆಗಳಿಗೆ ಸರಿಯಾಗಿ ಉತ್ತರಿಸಿ, ರಕ್ತದಾನ ಮಾಡಿದ ನಂತರ ಫಲಾಹಾರ ನೀಡಲಾಗುವುದು ಮತ್ತು ವಿಶ್ರಾಂತಿ ಪಡೆಯಲು ಸೂಚಿಸಲಾಗುವುದು.

 

ರಕ್ತಪಡೆಯುವವರು ಗಮನಿಸಬೇಕಾದ ಅಂಶಗಳು


ಯಾವಾಗಲೂ ರಕ್ತ/ರಕ್ತದ ಉತ್ಪನ್ನಗಳನ್ನು ಪರವಾನಿಗೆ ಹೊಂದಿರುವಂತಹ ರಕ್ತನಿಧಿ ಕೇಂದ್ರಗಳಿಂದ ಮಾತ್ರವೇ ಪಡೆಯಬೇಕು.
ರಕ್ತ/ರಕ್ತದ ಉತ್ಪನ್ನಗಳನ್ನು ಪಡೆಯುವ ಮೊದಲು, ರಕ್ತ ಪಡೆಯುವ ವ್ಯಕ್ತಿಯ ರಕ್ತವನ್ನು ದಾನಿಯ ರಕ್ತದೊಂದಿಗೆ ಹೊಂದಾಣಿಕೆ ಮಾಡಲಾಗಿದೆಯೇ ಎಂಬುದನ್ನು ಖಾತ್ರಿ ಪಡಿಸಿಕೊಳ್ಳಬೇಕು. ಲೇಬಲ್ ಇಲ್ಲದ ರಕ್ತ/ರಕ್ತದ ಉತ್ಪನ್ನಗಳನ್ನು ಪಡೆಯಬಾರದು.
ರಕ್ತಚೀಲದ ಮೇಲಿರುವ ಲೇಬಲ್ ನಲ್ಲಿ ನಮೂದಿಸಿರುವ ರಕ್ತದ ಗುಂಪು, ಆರ್.ಹೆಚ್. ಅಂಶ, ರಕ್ತವನ್ನು ಶೇಖರಿಸಿದ ದಿನಾಂಕ ಮತ್ತು ಅವಧಿ ಮುಗಿಯುವ ದಿನಾಂಕವನ್ನು ಗಮನಿಸಬೇಕು. ರಕ್ತದ ಗುಣಮಟ್ಟ ಹಾಗೂ ಸಾಮರ್ಥ್ಯ ವನ್ನು ಉಳಿಸಿಕೊಳ್ಳಲು ರಕ್ತವನ್ನು 2 ರಿಂದ 6 ಡಿಗ್ರಿ ತಾಪಮಾನದಲ್ಲಿ ಶೇಖರಿಸಿಟ್ಟಿರಬೇಕು.
ರಕ್ತ/ರಕ್ತದ ಉತ್ಪನ್ನಗಳನ್ನು ಪಡೆಯುವ ಮೊದಲು, ರಕ್ತವು ಹೆಚ್.ಐ.ವಿ. 1 ಮತ್ತು 2, ಹೆಚ್.ಬಿಎಸ್. ಎ ಜಿ, ಹೆಚ್ ಸಿ.ವಿ. ವಿ.ಡಿ.ಆರ್.ಎಲ್. ಮಲೇರಿಯಾದಂತಹ ಕಡ್ಡಾಯ ಪರೀಕ್ಷೆಗಳಿಗೆ ಒಳಪಡಿಸಲಾಗಿದೆಯೇ ಎಂಬುದನ್ನು ದೃಢಪಡಿಸಿಕೊಳ್ಳಬೇಕು.

   

ರಕ್ತದಾನಕ್ಕೆ ಪ್ರೇರಣೆ

ವೈದ್ಯಕೀಯ ಕ್ಷೇತ್ರದಲ್ಲಿ ಎಷ್ಟೇ ಮುಂದುವರೆದರೂ, ರಕ್ತಕ್ಕೆ ಪರ್ಯಾಯವಿಲ್ಲ. ರಕ್ತವನ್ನು ಕೃತಕವಾಗಿ ತಯಾರಿಸಲು ಅಸಾಧ್ಯ. ಮನುಷ್ಯ ಮಾತ್ರ ಮತ್ತೊಬ್ಬ ಮನುಷ್ಯನಿಗೆ ರಕ್ತ ದಾನವನ್ನು ಮಾಡಿ ಜೀವ ಉಳಿಸಬಹುದು. ಆದುದರಿಂದ ರಕ್ತದಾನ ಮಾಡಿ ಜೀವ ಉಳಿಸಿ.
ಒಂದು ಯೂನಿಟ್ ರಕ್ತದಾನವನ್ನು ಮಾಡುವುದರಿಂದ ಮೂರು ಜನರ ಜೀವ ಉಳಿಸಬಹುದು. ರಕ್ತದಾನ ಮಹಾದಾನ.
ರಕ್ತದಾನದಿಂದ ಆರೋಗ್ಯಕರವಾದ ಜೀವನ ಶೈಲಿ ವಿಸ್ತರಣೆಯಾಗುವುದು.
 ಹೆಚ್ಚಿನ ಮಾಹಿತಿ....

 

ರಕ್ತದಾನದಿಂದ ಆಗುವ ಪ್ರಯೋಜನಗಳು

ಉಚಿತ ಆರೋಗ್ಯ ತಪಾಸಣೆ.

ಮಾನವ ಜೀವ ಉಳಿಸಿದ ಸಂತೋಷ.

ಹೃದಯ ಕಾಯಿಲೆಯ ಅಪಾಯವನ್ನು ತಗ್ಗಿಸುತ್ತದೆ.

ದೇಹದಲ್ಲಿನ ಕ್ಯಾಲೋರಿಗಳನ್ನು ತಗ್ಗಿಸುತ್ತದೆ.

ಹೊಸ ರಕ್ತ ಕಣಗಳು ಉತ್ಪತ್ತಿಯಾಗುತ್ತದೆ.
ಹೆಚ್ಚಿನ ಮಾಹಿತಿ....

ರಕ್ತದಾನದ ಬಗ್ಗೆ ತಪ್ಪು ಕಲ್ಪನೆಗಳು ಮತ್ತು ವಾಸ್ತವಾಂಶಗಳು

ತಪ್ಪು ಕಲ್ಪನೆ: ಸಸ್ಯಾಹಾರವನ್ನು ಸೇವಿಸುವ ಮನುಷ್ಯನ ದೇಹದಲ್ಲಿ ಸಾಕಷ್ಟು ಕಬ್ಬಿಣಾಂಶದ ಕೊರತೆ ಇರುವುದರಿಂದ ಅಂತಹವರು ರಕ್ತದಾನ ಮಾಡುವುದು ಕಷ್ಟಸಾಧ್ಯ.
ವಾಸ್ತವಾಂಶ: “ಸಸ್ಯಾಹಾರವನ್ನು ಸೇವಿಸುವವರು ಸಹ ರಕ್ತದಾನ ಮಾಡಬಹುದು, ಸಮತೋಲನದ ಆಹಾರವನ್ನು ಸೇವಿಸುವುದರಿಂದ ದೇಹವು ಅಗತ್ಯವಿರುವಷ್ಟು ಕಬ್ಬಿಣದ ಅಂಶವನ್ನು ಉತ್ಪಾದಿಸಿಕೊಳ್ಳುತ್ತದೆ. ಈ ರೀತಿ ರಕ್ತದಾನ ಮಾಡಿದ ಒಂದು ತಿಂಗಳ ಅವಧಿಯಲ್ಲಿ ದೇಹವು ರಕ್ತವನ್ನು ಪುನರ್ ಉತ್ಪಾದಿಸುವ ಶಕ್ತಿ ಪಡೆದುಕೊಳ್ಳುತ್ತದೆ.
 ಹೆಚ್ಚಿನ ಮಾಹಿತಿ....