bloodbankeng


ರಕ್ತದಾನಕ್ಕೆ ಪ್ರೇರಣೆ:
  • ಜೀವವನ್ನು ಉಳಿಸಲು ನಾವು ವೈದ್ಯರಾಗಬೇಕಿಲ್ಲ, ರಕ್ತದಾನ ಮಾಡಿದರೆ ಸಾಕು, ರಕ್ತದಾನ ಮಾಡಿ ಜೀವ ಉಳಿಸಿದ ಸಂತೃಪ್ತಿ ಹೊಂದಬಹುದು.

  • ಪುರುಷರಲ್ಲಿ ಪ್ರತಿ 01 ಕಿ.ಲೋ ಗ್ರಾಂ ದೇಹದ ತೂಕಕ್ಕೆ 76 ಮಿ. ಲೀ. ಮತ್ತು ಮಹಿಳೆಯರಲ್ಲಿ ಪ್ರತಿ 01 ಕಿ.ಲೋ. ಗ್ರಾಂ ದೇಹದ ತೂಕಕ್ಕೆ 66 ಮಿ.ಲೀ. ನಷ್ಟು ರಕ್ತ ಇರುತ್ತದೆ. ಪ್ರತಿ 01 ಕಿ.ಲೋ ಗ್ರಾಂ ನ ದೇಹದ ತೂಕಕ್ಕೆ ಕೇವಲ 8 ಮಿ.ಲೀ. ನಂತೆ ಒಂದು ಬಾರಿಗೆ ಗರಿಷ್ಟ 450 ಮಿ.ಲೀ. ನಷ್ಟು ರಕ್ತವನ್ನು ಮಾತ್ರ ಪಡೆಯಲಾಗುವುದು.

  • ರಕ್ತದಾನ ಮಾಡಿದ 48 ಗಂಟೆಗಳ ಒಳಗೆ ರಕ್ತದಲ್ಲಿನ ದ್ರವಾಂಶವು ಉತ್ಪತ್ತಿಯಾಗುವುದು.

  • ದೇಹದಲ್ಲಿ ಕೆಂಪು ರಕ್ತಕಣಗಳ ಸರಾಸರಿ ಜೀವಿತಾವಧಿಯು 120 ದಿನಗಳಾಗಿರುತ್ತವೆ. ರಕ್ತದಾನ ಮಾಡದಿದ್ದರೂ ಸಹಾ ಕಣಗಳು ನೈಸರ್ಗಿಕವಾಗಿ ಸಾಯುತ್ತವೆ. ಹಾಗಾಗಿ ಈ ಕಣಗಳು ಸಾಯುವ ಮುನ್ನ ರಕ್ತದಾನ ಮಾಡುವುದರಿಂದ, ಬೇರೊಬ್ಬರ ಜೀವವನ್ನು ಉಳಿಸಿದ ತೃಪ್ತಿ ಹೊಂದಬಹುದು.

  • ರಕ್ತದಾನ ಮಾಡಿ ರಕ್ತದ ಅಲಭ್ಯತೆಯಿಂದ ಉಂಟಾಗುವ ಸಾವುಗಳನ್ನು ತಡೆಗಟ್ಟಿ.

  • ಭಾರತ ದೇಶದಲ್ಲಿ ಪ್ರತಿ 2 ಸೆಕೆಂಡಿಗೆ ಒಬ್ಬರಿಗೆ ರಕ್ತದ ಅವಶ್ಯಕತೆ ಇದೆ.

  • ಸ್ವಯಂಪ್ರೇರಿತ ರಕ್ತದಾನ ಆರೋಗ್ಯಕರ ಜೀವನಕ್ಕೆ ದಾರಿ.